ಉತ್ತಮ ಆಹಾರ ಮತ್ತು ವ್ಯಾಯಾಮ ಆರೋಗ್ಯಕರ ಜೀವನಶೈಲಿಗೆ ದಾರಿ ಮಾಡಿಕೊಡುತ್ತವೆ. ಜಡ ಜೀವನ ಶೈಲಿಯ ಜೊತೆಗೆ, ನಾವು ಕಳಪೆ ಆಹಾರ ಕ್ರಮವನ್ನು ಅನುಸರಿಸಿದರೆ, ಟೈಪ್ 2 ಮಧುಮೇಹದ ಅಪಾಯ ಗಮನಾರ್ಹವಾಗಿ ಹೆಚ್ಚುವ ಸಾಧ್ಯತೆ ಇರುತ್ತದೆ. ಕರಿದ ಆಹಾರ ಪದಾರ್ಥಗಳು, ಅತ್ಯಧಿಕ ಕಾರ್ಬ್ ಮತ್ತು ಸಕ್ಕರೆಯುಕ್ತ ತಿಸಿಸುಗಳು ನಾಲಗೆಗೆ ರುಚಿ ಎನಿಸಬಹುದು, ಆದರೆ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತವೆ. ಈಗಿನ ನಮ್ಮ ಜೀವನಶೈಲಿ , ನಮಗೆ ಮಧುಮೇಹದ ಅಪಾಯವನ್ನು ತರಬಲ್ಲದು, ಹಾಗಾಗಿ ಅಧಿಕ ಫೈಬರ್, ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅವು ಮಧುಮೇಹ, ಬೊಜ್ಜು ಮತ್ತಿತರ ಅನೇಕ ಕಾಯಿಲೆಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತವೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಆಹಾರಗಳು
1. ಧಾನ್ಯಗಳು: ಅತ್ಯಧಿಕ ವಿಟಮಿನ್ ಮತ್ತು ಮಿನರಲ್ಗಳನ್ನು ಹೊಂದಿರುವ ಧಾನ್ಯಗಳು ಹೇರಳ ಫೈಬರ್ ಅನ್ನು ಹೊಂದಿವೆ. ಅವು ಸಂಕೀರ್ಣ ಕಾರ್ಬ್ಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯಲ್ಲಿ ಸಮಯ ತೆಗೆದುಕೊಂಡು ಸಕ್ಕರೆ ಸ್ಪೈಕ್ಗಳಿಗೆ ಕಾರಣವಾಗುತ್ತವೆ. ಗೋಧಿ, ಬಾರ್ಲಿ, ಓಟ್ಸ್ , ಕಿನೋವಾ, ರಾಗಿ ಮುಂತಾದವುಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು.
2. ಹಸಿರು ಸೊಪ್ಪು ತರಕಾರಿಗಳು: ಇವುಗಳು ಅತ್ಯಧಿಕ ವಿಟಮಿನ್, ಮಿನರಲ್ ಮತ್ತು ಫೈಬರ್ ಅನ್ನು ಹೊಂದಿವೆ. ಪಾಲಕ್, ಲೆಟ್ಯೂಸ್, ಹರಿವೆ ಸೊಪ್ಪು ಇತ್ಯಾದಿಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೋರಿಗಳು ಇರುತ್ತವೆ. ನೀವು ಊಟಕ್ಕೂ ಮುನ್ನ ಸಲಾಡ್ ಮತ್ತು ಸೂಪ್ಗಳಲ್ಲಿ ಬಳಸಬಹುದು.
3. ಒಣ ಬೀಜಗಳು : ಒಣ ಬೀಜಗಳು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿವೆ. ಒಣ ಬೀಜಗಳಾದ ಬಾದಾಮಿ ಮತ್ತು ವಾಲ್ನಟ್ಗಳಲ್ಲಿ ಓಮೆಗಾ -3 ಮತ್ತು ಒಮೆಗಾ -6 ಫ್ಯಾಟಿ ಆಮ್ಲಗಳು ಹೇರಳವಾಗಿವೆ. ಹುರಿದ ಫಾಕ್ಸ್ ಬೀಜಗಳು ಅಥವಾ ಒಂದು ಮುಷ್ಟಿ ಹುರಿದ ಒಣ ಬೀಜಗಳು ಉಪಹಾರದ ಉತ್ತಮ ಆಯ್ಕೆಗಳೆನಿಸುತ್ತವೆ.
4. ಮೀನು, ಕೋಳಿ, ಮೊಟ್ಟೆ : ಮೀನುಗಳು ಒಮೆಗಾ -3 ಕೊಬ್ಬಿನ ಆಮ್ಲಗಳ ಮತ್ತು ಅತ್ಯಾವಶ್ಯಕ ತೈಲಗಳ ಉತ್ತಮ ಮೂಲಗಳು. ಕೋಳಿ ಮಾಂಸ, ಮೊಟ್ಟೆ ಮತ್ತು ಮೀನಿನ ಮಾಂಸದಲ್ಲಿ ಅತ್ಯಧಿಕ ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬ್ಗಳು ಇರುತ್ತವೆ. ಹೆಚ್ಚುವರಿ ಕ್ಯಾಲೋರಿಗಳನ್ನು ತಡೆಯಲು, ಬೇಕ್ ಅಥವಾ ಗ್ರಿಲ್ ಮಾಡಿ ಸೇವಿಸಿ. ಪ್ರೋಟೀನ್ ಸೇವನೆಯಿಂದ ಬೇಗನೆ ಹಸಿವಾಗುವುದಿಲ್ಲ, ಹಲವು ಗಂಟೆಗಳವರೆಗೆ ಹೊಟ್ಟೆ ತುಂಬಿದಂತಿರುತ್ತದೆ.
5. ಮೊಸರು ಮತ್ತು ಪನ್ನೀರ್ : ಇವುಗಳಲ್ಲಿ ಅತಿ ಹೆಚ್ಚಿನ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಡಿ ಇದೆ. ಕಡಿಮೆ ಕೊಬ್ಬು ಮತ್ತು ಕಾರ್ಬೊಹೈಡ್ರೇಟ್ಗಳನ್ನು ಆರಿಸಿಕೊಳ್ಳಲು ಪ್ರಯತ್ನಸಿ. ಪುದೀನಾ ಮಜ್ಜಿಗೆ ಮತ್ತು ಬೆರ್ರಿಗಳ ಜೊತೆಗೆ ಕಡಿಮೆ ಕೊಬ್ಬುಳ್ಳ ಮೊಸರನ್ನು ಸೇವಿಸುವುದು ಉತ್ತಮ ಆಯ್ಕೆ.
6. ಬೆರ್ರಿಗಳಂತಹ ತಾಜಾ ಹಣ್ಣುಗಳು : ಬೆರ್ರಿಗಳು ಮಧುಮೇಹ ಉಳ್ಳವರಿಗೆ ಸೂಪರ್ ಫುಡ್ ಎಂದು ಪರಿಗಣಿಸಲ್ಪಟ್ಟಿವೆ. ಅವುಗಳಲ್ಲಿ ಹೇರಳ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಇವೆ. ಸೇಬು, ಬೆರ್ರಿಗಳು ಮತ್ತು ಮರ ಸೇಬಿನಂತಹ ಹಣ್ಣುಗಳು ಹೆಚ್ಚಿನ ಫೈಬರ್ ಹೊಂದಿವೆ ಮತ್ತು ಸಕ್ಕರೆ ಮಟ್ಟವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತವೆ. ಅವುಗಳನ್ನು ನೀವು ಸಲಾಡ್ಗಳು , ಸ್ಮೂಥಿಗಳು ಅಥವಾ ಮೊಸರಿನಲ್ಲಿ ಹಾಕಿ ಸೇವಿಸಬಹುದು.