ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತನ್ನ ಎಳೆಯ ವಯಸ್ಸಿನಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನದ ಚಂಡೆಯನ್ನು ಸುಲಲಿತವಾಗಿ ನುಡಿಸುವ ಆಯುಷ್ ಆಚಾರ್ಯ
ಇವನ ತಂದೆ ರವಿ ಆಚಾರ್ಯ ಹೆಮ್ಮುಂಜ್ಜೆ ಹಾಗೂ ತಾಯಿ ಆಶಾ ಆರ್ ಆಚಾರ್ಯ ಇವನ ಚಂಡೆಯ ಮೇಲಿನ ಆಸಕ್ತಿ ಕಂಡು ಭಗವತಿ ಕಲಿಕಾ ಕೇಂದ್ರ ಬೆಂಗಳೂರು ಇಲ್ಲಿ ಚಂಡೆಯ ಅಭ್ಯಾಸಕ್ಕಾಗಿ ಗುರುಗಳಾದ ಶಂಕರ ಬಾಳ್ಕುದ್ರು ಇವರಲ್ಲಿ ತರಗತಿಗೆ ಸೇರಿಸಿದ್ದಾರೆ..
ಪ್ರಸ್ತುತ ಬೆಂಗಳೂರಿನ ನಾರಾಯಣ ಟೆಕ್ನೊ ಸ್ಕೂಲ್ ಬೆಂಗಳೂರು ಇಲ್ಲಿ ಎರಡನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಈತನ ಚಂಡೆ ನುಡಿಸುವ ಆಸಕ್ತಿ ಭವಿಷ್ಯದ ಭರವಸೆಯ ಚಂಡೆವಾದಕ ಆಗುವಲ್ಲಿ ಪುಟ್ಟ ಹೆಜ್ಜೆಯಾಗಿದೆ