ಕೆಲವು ದಶಕಗಳ ಹಿಂದೆ 50, 60, ವಯಸ್ಸಿನ ಪುರುಷರು, ಮಹಿಳೆಯರು ಹೃದಯಾಘಾತಕ್ಕೆ (Heart Attack)ಒಳಗಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸೂತ್ರವೇ ತಲೆಕೆಳಗಾಗುತ್ತಿದ್ದು, ಯುವಜನರಲ್ಲಿ (Young People) ಅಂದರೆ 20, 30, 40ನೇ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಒಟ್ಟಾರೆಯಾಗಿ ಅಮೆರಿಕನ್ನರಲ್ಲಿ(americans) ಹೃದಯಾಘಾತದಿಂದ ಬಳಲುತ್ತಿರುವವರು ಕಡಿಮೆಯಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಕಾರಣ.. ಜೀವನಶೈಲಿ, ಮಧುಮೇಹ.. ಯುವಜನರಲ್ಲಿ ಹೃದಯಾಘಾತ ಹೆಚ್ಚಳವಾಗುವುದಕ್ಕೆ ಹಲವಾರು ಕಾರಣಗಳಿವೆ. ಕಾರ್ಡಿಯಾಲಜಿಸ್ಟ್ ಲ್ಯೂಕ್ ಲಾಫಿನ್, ಎಂಡಿ ಪ್ರಕಾರ, ದೊಡ್ಡ ಅಪಾಯಕಾರಿ ಅಂಶವೆಂದರೆ ಟೈಪ್ 2 ಮಧುಮೇಹದ ಹೆಚ್ಚಳ ಎನ್ನುತ್ತಾರೆ.
ಟೈಪ್ 2 ಮಧುಮೇಹದ ಹೆಚ್ಚಳಕ್ಕೆ ಕಾರಣಗಳು
ಡೈರಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳ ಯಥೇಚ್ಛ ಸೇವನೆ
ತೂಕ ಮತ್ತು ಬೊಜ್ಜು
ಜಡ ಜೀವನಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ
ನಾವು ಈಗ ಕೇವಲ 25 ಅಥವಾ 35 ವರ್ಷ ವಯಸ್ಸಿನ ಯುವಕರಲ್ಲಿ ಹೃದಯಾಘಾತ ಸಂಭವಿಸುವುದನ್ನು ನೋಡುತ್ತಿದ್ದೇವೆ. ಆದರೆ 20 ವರ್ಷಗಳ ಹಿಂದೆ ಪರಿಸ್ಥಿತಿ ಈ ರಿತಿ ಇರಲಿಲ್ಲಎಂದು ಡಾ. ಲಾಫಿನ್ ಹೇಳುತ್ತಾರೆ. ಕಳೆದ ಕೆಲವು ದಶಕಗಳಿಂದ ಹೊಸ ಅಭಿವೃದ್ಧಿಯ ಲಕ್ಷಣಗಳು ಜನರ ಜೀವನಶೈಲಿಯನ್ನು ಬದಲಾಯಿಸಿದೆ. ದಿನದಿಂದ ದಿನಕ್ಕೆ ಹೊರಗಿನ ಆಹಾರಗಳನ್ನು ತಿನ್ನುವ ಪರಿಪಾಠವು ಯುವಕರಲ್ಲಿ ಹೆಚ್ಚಾಗಿದೆ. ವ್ಯಾಯಾಮಗಳನ್ನೆಲ್ಲಾ ಮರೆತೇ ಬಿಟ್ಟಿದ್ದಾರೆ. ಹೆಚ್ಚುತ್ತಿರುವ ಸೋಮಾರಿತವು ಇದಕ್ಕೆ ಕಾರನವಗುತ್ತಿದ್ದು, ದಿನದಲ್ಲಿ ನಾವು ಎಷ್ಟು ಗಂಟೆಗಳ ಕಾಲ ಚಟುವಟಿಕೆಯಿಂದ ಕೂಡಿರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಉದ್ಯೋಗಗಳು ಸಹ ಹೆಚ್ಚು ಜಡತ್ವದಿಂದ ಕೂಡಿದ್ದು, ಕಳೆದ ದಶಕಗಳಿಂದ ದೈಹಿಕ ಚಟುವಟಿಕೆಗಳು ಯುವಕರಲ್ಲಿ ಕಡಿಮೆಯಾಗಿದೆ. ಇವೆಲ್ಲ ಕಾರಣಗಳಿಂದ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಕ್ಯೆ ಹೆಚ್ಚಳವಾಗುತ್ತಿದೆ.
ಎರಡನೇ ಹೃದಯಾಘಾತ ಆಗದಂತೆ ತಡೆಯುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಈ ಕೆಟ್ಟ ಅಭ್ಯಾಸಗಳು ಬಾಲ್ಯದಿಂದಲೇ ಶುರುವಾಗುತ್ತಿದ್ದು, ಇವುಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಲಾಫಿನ್ ಪ್ರಾಥಮಿಕ ತಡೆಗಟ್ಟುವಿಕೆಹೃದಯಾಘಾತಕ್ಕೆ ಒಳಗಾದಾಗ ಮುಖ್ಯವಾಗಿ ಹೃದಯ ತಜ್ಞರು ಯಾವಾಗಲೂ ಪ್ರಾಥಮಿಕ ಮತ್ತು ದ್ವಿತೀಯಕ ತಡೆಗಟ್ಟುವಿಕೆ ಬಗ್ಗೆ ಯೋಚಿಸುತ್ತಾರೆ. ಅದು ಮೊದಲ ಹೃದಯಾಘಾತವನ್ನು ತಡೆಯಲು ಪ್ರಯತ್ನಿಸುವುದು ಮತ್ತು ನಂತರ ಎರಡನೇ ಹೃದಯಾಘಾತ ಆಗದಂತೆ ರಕ್ಷಿಸುವುದು. ಇತ್ತೀಚೆಗೆ, ಪ್ರಾಥಮಿಕ ತಡೆಗಟ್ಟುವಿಕೆಯ ಕಲ್ಪನೆ ಬದಲಾವಣೆಯಾಗಿದೆ. ಇದರರ್ಥ ಹೃದಯಾಘಾತದ ಅಪಾಯಕಾರಿ ಅಂಶಗಳನ್ನು ತಡೆಯಲು ಪ್ರಯತ್ನಿಸುವುದು. ಡಾ. ಲಾಫಿನ್ ಪ್ರಕಾರ, ಇದು ಸಾಮಾಜಿಕ ಮತ್ತು ಪರಿಸರ ಪರಿಸ್ಥಿತಿಗಳನ್ನು ಬದಲಾಯಿಸಲು ಪ್ರಯತ್ನಿಸುವುದನ್ನು ಒಳಗೊಂಡಿರುತ್ತದೆ. ಅದು ಅಪಾಯಕಾರಿ ಅಂಶಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಪ್ರಗತಿ ಸಾಧಿಸಬಹುದು.
ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರಗಳನ್ನು ಸೇವಿಸುವುದು, ಧೂಮಪಾನ ಮಾಡದಿರುವುದು, ಒತ್ತಡ ಮತ್ತು ರಕ್ತದೊತ್ತಡವನ್ನು ನಿರ್ವಹಿಸುವುದು ಮುಂತಾದವುಗಳ ಮೇಲೆ ನಾವು ನಿಯಂತ್ರಣ ಹೊಂದುವುದು ಪ್ರಮುಖ ವಿಷಯಗಳಾಗಿವೆ. ಯಾವ ನಡವಳಿಕೆಗಳು ನಿಮ್ಮನ್ನು ಹೃದಯರಕ್ತನಾಳದ ಕಾಯಿಲೆ ಅಪಾಯಕ್ಕೆ ಒಳಪಡಿಸುತ್ತವೆ ಇಲ್ಲಿದೆ ನೋಡಿ..
ನೀವು ಅಪಾಯದಲ್ಲಿದ್ದರೆ?
ಹೃದಯಾಘಾತವು ಯಾರಿಗಾದರೂ ಸಂಭವಿಸಬಹುದು. ಆದರೆ ಅನುವಂಶೀಯತೆಯ ಅಪಾಯವು ವಿಶೇಷವಾಗಿ ಹೆಚ್ಚಾಗಿರುತ್ತದೆ. ಹೃದ್ರೋಗದ ಬಗ್ಗೆ ಕುಟುಂಬದ ಇತಿಹಾಸ ಹೊಂದಿರುವವರಿಗೆ ಪ್ರಾಥಮಿಕ ತಡೆಗಟ್ಟುವಿಕೆ ನಿರ್ಣಾಯಕವಾಗಿದೆ. ಹೃದಯಾಘಾತ ಅಥವಾ ಪಾಶ್ರ್ವವಾಯು ಇತಿಹಾಸ ಹೊಂದಿರುವ 55 ವರ್ಷದೊಳಗಿನ ಮೊದಲ ಹಂತದ ಪುರುಷ ಸಂಬಂಧಿ (ನಿಮ್ಮ ತಂದೆ, ಸಹೋದರ ಅಥವಾ ಮಗನಂತೆ) ಅಥವಾ ಮೊದಲ ಹಂತದ ಸ್ತ್ರೀ ಸಂಬಂಧಿ (ನಿಮ್ಮ ತಾಯಿ, ಸಹೋದರಿ ಅಥವಾ ಮಗಳು) ನಿಮ್ಮ ಆನುವಂಶಿಕ ಹೃದಯ ಕಾಯಿಲೆಯ ಅಪಾಯವನ್ನು ವ್ಯಾಖ್ಯಾನಿಸಲಾಗಿದೆ.
ತಡೆಗಟ್ಟುವಿಕೆ: ಮೊದಲು ನೀವು ಜೀವನಶೈಲಿಯಲ್ಲಿ ಅಳವಡಿಸಿಕೊಂಡಿರುವ ಅಪಾಯಕಾರಿ ಅಂಶಗಳು ಯಾವುವು ಎಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅಧಿಕ ರಕ್ತದೊತ್ತಡ, ಸೊಂಟದ ಸುತ್ತಳತೆ, ಅನಾರೋಗ್ಯಕರ ಬಿಎಂಐ. ಹಾಗಾಗಿ ಮತ್ತು ಅವುಗಳನ್ನು ಮೊದಲೇ ಸರಿಪಡಿಸಿಕೊಳ್ಳುವತ್ತ ಎಚ್ಚರವಹಿಸಿ. “ನಾವು ನಮಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ಉತ್ತಮ ಅಭ್ಯಾಸಗಳನ್ನು ಹೊಂದಿಸಬೇಕಾಗಿದೆ, ವಿಶೇಷವಾಗಿ ಬಾಲ್ಯದ ಸ್ಥೂಲಕಾಯತೆಯ ಮೇಲೆ ನಿಗಾ ಇಡಬೇಕಾಗುತ್ತದೆ ಮತ್ತು ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ನಮ್ಮ ಸಾಕಷ್ಟು ಯುವಜನರು ತಮ್ಮ ಅಪಾಯಕಾರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ನಾವು ಅಪಾಯಕಾರಿ ಅಂಶಗಳ ಮಾರ್ಪಾಡುಗಳ ಬಗ್ಗೆ ಯೋಚಿಸಲೇಬೇಕು. ಇಲ್ಲವಾದಲ್ಲಿ ಯುವ ಜನರಲ್ಲಿ ಹೃದಯಾಘಾತದ ಪ್ರಮಾಣವು ಏರುತ್ತಲೇ ಇರುತ್ತದೆ.