ಯಾಕೆ ವ್ಯಾಯಾಮ ದೇಹಕ್ಕೆ ಅತ್ಯಗತ್ಯ?

ವ್ಯಾಯಾಮವೆನ್ನುವುದು ದೈಹಿಕ ಆರೋಗ್ಯವನ್ನು ಕಾಪಾಡಲು ಕಾರಣ. ನಿತ್ಯವೂ ವ್ಯಾಯಾಮ ಅಭ್ಯಾಸ ಮಾಡಿದರೆ, ಅದರಿಂದ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬಹುದು. ಆದರೆ ವ್ಯಾಯಾಮದ ವಿಚಾರದಲ್ಲಿ ಶಿಸ್ತು ಅತೀ ಅಗತ್ಯ.

ಶಿಸ್ತು ಇಲ್ಲದೆ ಇದ್ದರೆ ಅದರಿಂದ ನಿತ್ಯವೂ ವ್ಯಾಯಾಮ ಮಾಡಲು ಆಗದು ಮತ್ತು ಉದಾಸೀನತೆಯು ಆವರಿಸಬಹುದು. ಪ್ರತಿನಿತ್ಯವೂ ಮಧ್ಯಮದಿಂದ ತೀವ್ರ ರೀತಿಯ ವ್ಯಾಯಾಮವನ್ನು 45-50 ನಿಮಿಷ ಕಾಲ ನಿತ್ಯವೂ ಮಾಡಬೇಕು.

  • ನಿಯಮಿತವಾಗಿ ವ್ಯಾಯಾಮ ಮಾಡಿದರೆ ಅದರಿಂದ ಹೃದಯವು ಫಿಟ್ ಮತ್ತು ಕ್ರಿಯಾಶೀಲವಾಗಿ ಇರುವುದು. ಏರೋಬಿಕ್ಸ್ ಮತ್ತು ಕಾರ್ಡಿಯೋ ವ್ಯಾಯಾಂಗಳು ಹೃದಯದ ಬಡಿತಕ್ಕೆ ಒಳ್ಳೆಯದು ಮತ್ತು ಇದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದು.
  • ವ್ಯಾಯಾಮವು ನಿರಂತರವಾಗಿ ಇರದೇ ಇದ್ದರೆ ಆಗ ಇದರಿಂದ ಹೃದಯದ ಕಾರ್ಯವು ಕುಗ್ಗುವುದು. ಇದರಿಂದ ದೇಹದ ಬೇರೆ ಕಾರ್ಯಗಳ ಮೇಲೆ ಪರಿಣಾಮ ಬೀರುವುದು. ಉಸಿರಾಟದ ಸಮಸ್ಯೆ, ಕೊಲೆಸ್ಟ್ರಾಲ್ ಮತ್ತು ಹೃದಯದ ಸಮಸ್ಯೆಗಳು ಕಾಡಬಹುದು.
  • ದೇಹದಲ್ಲಿ ಸ್ನಾಯುಗಳು ನಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡುವುದು ಮತ್ತು ಅವುಗಳಿಗೆ ಶಕ್ತಿ ತುಂಬುವುದು. ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡದೆ ಇದ್ದರೆ ಆಗ ಸ್ನಾಯುಗಳ ಶಕ್ತಿಯು ಕುಂದುವುದು ಮತ್ತು ಇದರಿಂದ ದೌರ್ಬಲ್ಯವು ಬರಬಹುದು.
  • ದೇಹದ ಚಲನೆಯು ಉತ್ತಮವಾಗಿ ಇರಲು ಸ್ನಾಯುಗಳು ಬಲವಾಗಿದ್ದುಕೊಂಡು ಕಾರ್ಯನಿರ್ವಹಿಸುವುದು ಅತೀ ಅಗತ್ಯ. ಸ್ನಾಯುಗಳು ದುರ್ಬಲವಾದರೆ ಆಗ ಸಣ್ಣ ಸಣ್ಣ ಕೆಲಸಗಳನ್ನು ಮಾಡಲು ಕಷ್ಟವಾಗಲಿದೆ.
  • ವ್ಯಾಯಾಮದಿಂದ ನಿದ್ರೆಯ ಗುಣಮಟ್ಟವು ಉತ್ತಮವಾಗುವುದು. ಒಳ್ಳೆಯ ನಿದ್ರೆಯು ಬರದೇ ಇದ್ದರೆ ಆಗ ನೀವು ದೈಹಿಕವಾಗಿ ಸರಿಯಾಗಿ ಚಟುವಟಿಕೆಯಲ್ಲಿ ಇಲ್ಲ ಎಂದು ಹೇಳಬಹುದು. ಮಧ್ಯಮದಿಂದ ತೀವ್ರ ರೀತಿಯ ವ್ಯಾಯಾಮದಿಂದ ರಾತ್ರಿ ಒಳ್ಳೆಯ ನಿದ್ರೆ ಬರುವುದು.
  • ವ್ಯಾಯಾಮವಿಲ್ಲದೆ ಮಲಗಿದರೆ ಆಗ ಮಲಗಿದ ಬಳಿಕ ನಿದ್ರೆ ಬರಲು ತೊಂದರೆ ಆಗುವುದು. ವ್ಯಾಯಾಮವು ಒತ್ತಡ ಕಡಿಮೆ ಮಾಡುವುದು ಮತ್ತು ನಿದ್ರೆಯನ್ನು ಉತ್ತಮಪಡಿಸುವುದು. ನಿದ್ರೆಯ ಸಮಸ್ಯೆಯು ಇದ್ದರೆ ಅದರಿಂದ ಹಾರ್ಮೋನ್ ಸಮಸ್ಯೆ, ಮಧುಮೇಹ ಮತ್ತು ತೂಕ ಹೆಚ್ಚಳವಾಗುವ ಸಾಧ್ಯತೆಯು ಇರುವುದು.

Related Articles